INFO
- Address: Hussainiya Foundation
#368/1, Jublee Well Road, Davangere 577001, Karnataka (India). - Mobile: +91 99860 12777
- Email ID:hussainiyafoundationdavangere@gmail.com
ಹುಸೇನಿಯಾ ಫೌಂಡೇಷನ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯು 2015 ರಲ್ಲಿ ದಾವಣಗೆರೆ ಶ್ರೀ ಕೆ. ಚಮನ್ ಸಾಬ್ ಮತ್ತು ಅವರ ಕುಟುಂಬದವರ ನೇತೃತ್ವದಲ್ಲಿ ಪ್ರಾರಂಭವಾಯಿತು.
ಸಂಸ್ಥಾಪಕರಾದ ಶ್ರೀ ಕೆ. ಚಮನ್ ಸಾಬ್ ಇವರು ಕನ್ನಡ ಭಾಷೆಯ ಕುರ್ಆನ್ ಪುಸ್ತಕವನ್ನು ಓದಲು ಪ್ರಾರಂಭಿಸಿ, ಕ್ರಮೇಣ ಅರಬಿ ಭಾಷೆಯಲ್ಲಿನ ಕುರ್ಆನ್ನ್ನು ಸುಲಲಿತವಾಗಿ ಪಠಣ ಮಾಡಲು ಪ್ರಾರಂಭಿಸಿದರು ಆದರೆ ಕನ್ನಡ ಭಾಷೆಯಲ್ಲಿರುವ ಕುರ್ಆನ್ ಪುಸ್ತಕದ ಅಕ್ಷರಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿದ್ದರಿಂದ ಅರಬೀ ಭಾಷೆಯಲ್ಲಿನ ಪುಸ್ತಕಗಳನ್ನು ಕನ್ನಡ ಲಿಪ್ಯಂತರಗೊಳಿಸಿ ಪ್ರಕಾಶನಗೊಳಿಸಲು ತೀಮರ್ಾನಿಸಿದರು. ಅದರಂತೆ ಅರಬಿ ಭಾಷೆ ಬಾರದ ಮುಸ್ಲಿಂ ಬಾಂಧವರಿಗೆ ಕುರ್ಆನ್ ಮತ್ತು ಅರಬಿ ಬಾಷೆಯ ಪುಸ್ತಕಗಳನ್ನು ಓದಲು ಆನುಕೂಲವಾಗುವಂತೆ ಕನ್ನಡ ಲಿಪ್ಯಂತರಣಗೊಳಿಸಿ ಪ್ರಕಾಶನಗೊಳಿಸಿದರು. ನಂತರ ಈಗ ತಮ್ಮ ತಂದೆಯವರಾದ ದಿ|| ಕಕ್ಕರಗೊಳ್ಳ ಹುಸೇನ್ಸಾಬ್ ಇವರ ನೆನಪಿನಲ್ಲಿ ಹುಸೇನಿಯಾ ಫೌಂಡೇಷನ್ (ರಿ.) ಸ್ಥಾಪಿಸಿ ಅದರ ವತಿಯಿಂದ ಇನ್ನೂ ಹೆಚ್ಚಿನ ಪುಸ್ತಕಗಳನ್ನು ಪ್ರಕಾಶನಗೊಳಿಸಲು ಉದ್ದೇಶಿಸಲಾಗಿದೆ.
ಹಾಗೂ ಸಂಸ್ಥೆಯು ಸಮಾಜದಲ್ಲಿ ಅಶಕ್ತ ಜನರಿಗಾಗಿ ಸಾಮಾಜಿಕ ಕಾರ್ಯಗಳಾದ ಆರೋಗ್ಯ ಶಿಬಿರಗಳು, ಹಿರಿಯ ನಾಗರೀಕರಿಗೆ ಮತ್ತು ಪೌರ ಕಾಮರ್ಿಕರಿಗೆ ಉಣ್ಣೆಯ ಹೊದಿಕೆಗಳನ್ನು ನೀಡುವ ಕಾರ್ಯ ಮತ್ತು ಇನ್ನೀತರೆ ಸಮಾಜ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ.